Sri. Suryakanth Gurupadappa Nagamarapalli

logo

Grama Vastavya

ಜನರ ಮನೆ ಬಾಗಿಲಿಗೆ ಸವಲತ್ತು: ಶ್ರೀ ಆರ್. ಅಶೋಕ

ಬೀದರ್: ಜನರ ಮನೆ ಬಾಗಿಲಿಗೆ ವಿವಿಧ ಯೋಜನೆಗಳ ಸೌಲಭ್ಯಗಳನ್ನು ತಲುಪಿಸುವ ಕೆಲಸವನ್ನು ರಾಜ್ಯ ಬಿಜೆಪಿ ಸರಕಾರ ಕಾಳಜಿಯಿಂದ ಮಾಡುತ್ತಿದೆ ಎಂದು ಕಂದಾಯ ಸಚಿವ ಶ್ರೀ ಆರ್. ಅಶೋಕ ಇಲ್ಲಿ ಹೇಳಿದರು.
ನಗರದಲ್ಲಿಂದು ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಸರಳಗೊಳಿಸಲಾಗಿದೆ ಎಂದು ಹೇಳಿದರು. ಮಾಸಾಶನ, ವೃದ್ಧಾಪ್ಯ ವೇತನಕ್ಕಾಗಿ ಕಚೇರಿ ಸುತ್ತುವ ಕಷ್ಟ ತಪ್ಪಿಸಲಾಗಿದೆ. ಕಂದಾಯ ದಾಖಲೆಗಳಿಗಾಗಿ ರೈತರು ತಿಂಗಳುಗಟ್ಟಲೇ ಓಡಾಡಬೇಕಾಗಿತ್ತು. ಅದನ್ನೂ ಸರಳಗೊಳಿಸಲಾಗಿದೆ. ಭೂಪರಿವರ್ತನೆಯಲ್ಲಿನ ಸಮಸ್ಯೆಯನ್ನು ನಿವಾರಿಸಲಾಗಿದೆ ಎಂದು ಕಂದಾಯ ಸಚಿವರು ಹೇಳಿದರು.
ಸಾಮಾಜಿಕ ಭದ್ರತಾ ಯೋಜನೆಗಳಡಿ ವಿವಿಧ ಸೌಲಭ್ಯಗಳನ್ನು ಪಡೆಯಲು ಜನ ಕಷ್ಟಪಡುತ್ತಿದ್ದರು. ಕಚೇರಿ ಸುತ್ತ ಓಡಾಡಬೇಕಾದ ಕಷ್ಟ ಇತ್ತು. ಅದನ್ನು ಕೊನೆಗೊಳಿಸಲಾಗಿದೆ. 72 ಗಂಟೆಯಲ್ಲಿ ಮಂಜೂರಾತಿ ಪ್ರಮಾಣಪತ್ರ ಸಿಗುವಂತೆ ಮಾಡುವ ಮೂಲಕ ಬಿಜೆಪಿ ಸರಕಾರ ಜನರ ಸಮಸ್ಯೆಗೆ ಸ್ಪಂದಿಸಿದೆ ಎಂದು ಸಚಿವ ಶ್ರೀ ಆರ್. ಅಶೋಕ ಹೇಳಿದರು.
ಸರಕಾರದ ಜನಪರ, ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಮುಖಂಡರು, ಕಾರ್ಯಕರ್ತರು ಮಾಡಬೇಕು ಎಂದು ಸಚಿವರು ಸಲಹೆ ನೀಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಶ್ರೀ ಶಿವಾನಂದ ಮಂಠಾಳಕರ್, ಬುಡಾ ಶ್ರೀ ಅಧ್ಯಕ್ಷ ಬಾಬು ವಾಲಿ, ಕರ್ನಾಟಕ ಕೈಗಾರಿಕಾ ನಿಗಮದ ಅಧ್ಯಕ್ಷ ಶ್ರೀ ಶೈಲೇಂದ್ರ ಬೆಲ್ದಾಳೆ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ, ನಾರಂಜಾ ಕಾರಖಾನೆ ಅಧ್ಯಕ್ಷ ಶ್ರೀ ಸಿದ್ರಾಮ ಡಿಕೆ, ಮುಖಂಡರಾದ ಶ್ರೀ ಜಯಕುಮಾರ ಕಾಂಗೆ, ಶ್ರೀ ಗುರುನಾಥ ಜ್ಯಾಂತಿಕರ್, ಶ್ರೀ ವಿಜಯಕುಮಾರ ಎಸ್. ಪಾಟೀಲ್ ಗಾದಗಿ ಮತ್ತಿತರರು ಉಪಸ್ಥಿತರಿದ್ದರು.