Sri. Suryakanth Gurupadappa Nagamarapalli

Jayantotsava

ಶ್ರೀ ಜಗದ್ಗುರು ಪಂಚಾಚಾರ್ಯ ಜಯಂತಿ ಯುಗಮಾನೋತ್ಸವ ಸೇವಾ ಸಮಿತಿ, ಬೀದರ, ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ವಿಶ್ವ ಹಿಂದೂ ಪರಿಷತ್ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಶ್ರೀ ಜಗದ್ಗುರು ಪಂಚಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮದ ಉದ್ಘಾಟನೆ ಇಂದು ಸಾಯಂಕಾಲ ವಿಜ್ರಂಬಣೆಯಿಂದ ಜರುಗಿತು.
 
ಶ್ರೀಮದ್ ರಂಭಾಪುರಿ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾll ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಹಾಗೂ ಶ್ರೀಮದ್ ಭಗವತ್ ಪದಮ್ ಕೇದಾರ ಪೀಠ ಶ್ರೀ 1008 ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯರು, ಪೂಜ್ಯ ಶ್ರೀ ಷ. ಬ್ರ. ಶಿವಾಚಾರ್ಯರತ್ನ ವಿರೂಪಾಕ್ಷ ಶಿವಾಚಾರ್ಯರು, ಪೂಜ್ಯ ಶ್ರೀ ಷ. ಬ್ರ. ರಾಜೇಶ್ವರ ಶಿವಾಚಾರ್ಯರು, ಪೂಜ್ಯ ಶ್ರೀ ಷ. ಬ್ರ. ಹಾವಗಿಲಿಂಗೇಶ್ವರು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದರು ಮತ್ತು ಕೇಂದ್ರ ಸಚಿವರಾದ ಶ್ರೀ ಭಗವಂತ ಖುಬಾ, ಶ್ರೀ ಈಶ್ವರ ಖಂಡ್ರೆ, ಶ್ರೀ ಬಿ. ಬಿ. ಪಾಟೀಲ, ಶ್ರೀ ರಾಜಶೇಖರ್ ಪಾಟೀಲ, ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ, ಶ್ರೀ ಈಶ್ವರ್ ಸಿಂಗ್ ಠಾಕೂರ, ಶ್ರೀ ಸಿದ್ರಾಮಯ್ಯ ಸ್ವಾಮಿ, ಶ್ರೀ ರವಿ ಸ್ವಾಮಿ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.